Posts

Showing posts from November, 2018

2018 ರ ಗಣರಾಜ್ಯೋತ್ಸವದ ಮುಖ್ಯ ಅತಿಥಿ- ಸಿರಿಲ್ ರಾಮಫೋಸಾ, ದಕ್ಷಿಣ ಆಫ್ರಿಕಾ ಅಧ್ಯಕ್ಷ

ಈ ಬಾರಿಯ ಗಣರಾಜ್ಯೋತ್ಸವಕ್ಕೆ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ ಮುಖ್ಯ ಅತಿಥಿ.!!! ನವದೆಹಲಿ: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೋಸಾ ಅವರು ಬರುವ 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.!! 2018ರ ಫೆಬ್ರವರಿಯಲ್ಲಿ ರಾಮಫೋಸಾ ದಕ್ಷಿಣಾಫ್ರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಗಣರಾಜ್ಯೋತ್ಸವಕ್ಕೆ ಅತಿಥಿಯಾಗಬೇಕು ಎಂಬ ಆಮಂತ್ರಣವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಭಾರತ ಸರ್ಕಾರ ನೀಡಿದ ಆಮಂತ್ರಣವನ್ನು ಅವರು ನಿರಾಕರಿಸಿದ್ದರು. ಅಂದು ಟ್ರಂಪ್​ ಅವರು ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೇ ಬೇಕಾಗಿದ್ದರಿಂದ ಭಾರತಕ್ಕೆ ಭೇಟಿಕೊಡಲು ಆಗುವುದಿಲ್ಲ ಎಂದು ವೈಟ್​ಹೌಸ್​ ಮಾಧ್ಯಮಗಳಿಗೆ ಮಾಹಿತಿ ನೀಡಿತ್ತು. ರಾಮಫೋಸಾ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಬೇಕು ಎಂಬುದು ನೆಲ್ಸನ್​ ಮಂಡೇಲಾ ಅವರ ಇಂಗಿತವಾಗಿತ್ತು. ಏಪ್ರಿಲ್​ನಲ್ಲಿ ನಡೆದ ವಾರ್ಷಿಕ ಗಾಂಧಿ ನಡಿಗೆಯ ನೇತೃತ್ವವನ್ನು ರಾಮಫೋಸಾ ವಹಿಸಿದ್ದರು. ಅಧಿಕಾರದಲ್ಲಿದ್ದಾಗ ಅಧ್ಯಕ್ಷರೊಬ್ಬರು ನಡಿಗೆಯಲ್ಲಿ ಭಾಗವಹಿಸಿರುವುದು ಇದೇ ಮೊದಲು. ಸಮಯದಾಯ ಜಾಗೃತಿಗಾಗಿ ಜೋಹಾನ್ಸ್​ಬರ್ಗ್​ದ ದಕ್ಷಿಣ ಭಾಗದಲ್ಲಿರುವ ಭಾರತೀಯ ಪಟ್ಟಣ ಎಂದೇ ಹೆಸರಾದ ಲೆನಾಸಿಯಾದಲ್ಲಿ ಆಯೋಜಿಸಿದ್ದ ಗಾಂಧಿ ನಡಿಗೆಯಲ್ಲಿ ಸುಮಾರು 5000...